ಇತ್ತೀಚಿಗೆ ಸೇರಿಸಲಾದವುಗಳು ( ಕನ್ನಡ )

( ಕನ್ನಡ )
2013-02-28
ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವ ಏಕದೆವತ್ವ ಹಾಗೂ ಪ್ರವಾದಿತ್ವವನ್ನು ತುಲನಾತ್ಮಕವಾಗಿ ಮುಂದಿಡಲು ಹಾಗೂ ಈ ವಿಷಯದಲ್ಲಿ ಅವುಗಳ ನಿಲುವನ್ನು ಸ್ಪಷ್ಟಗೊಳಿಸಲು ಉಪನ್ಯಾಸಕ ಪ್ರಯತ್ನಿಸಿದ್ದಾರೆ. ಇಸ್ಲಾಂ ಮಾತ್ರವೇ ಸತ್ಯವೆಂಬುದಕ್ಕೆ ಅವರು ಪುರಾವೆಗಳನ್ನು ಸಮರ್ಪಿಸುತ್ತಾರೆ ಹಾಗೂ ಇದರ ಮೂಲಕ ಮಾತ್ರ ವ್ಯಕ್ತಿ ಮತ್ತು ಸಮಾಜ ರಕ್ಷಣೆ ಹೊಂದಲು ಸಾಧ್ಯ.

( ಕನ್ನಡ )
2013-02-28
ಪ್ರಸ್ತುತ ಉಪನ್ಯಾಸದಲ್ಲಿ ಸನ್ಮಾರ್ಗದ ಬಗ್ಗೆ ಮಾತನಾಡುವ ಉಪನ್ಯಾಸಕರು ಅದನ್ನು ಜತನದಿಂದ ಕಾಪಾಡಿಕೊಳ್ಳುವಂತೆ ಉಪದೇಶಿಸುತ್ತಾರೆ. ಇದನ್ನು ಕುಟುಂಬ ಮಹಿಮೆಯಿಂದಲೂ ಸಂಪತ್ತಿನಿಂದಲೂ ಪಡೆಯಲಿಕ್ಕೆ ಆಗುವುದಿಲ್ಲ. ಇದನ್ನು ಪಡೆದರೆ ಮಾತ್ರ ಸ್ವರ್ಗಕ್ಕೆ ಹೋಗಬಹುದು ಎಂದು ಉದಾಹರಣೆಗಳ ಮೂಲಕ ಖುರ್ ಆನ್ ಮತ್ತು ಸುನ್ನತ್ ನ ಪುರಾವೆಗಳ ಮೂಲಕ ಸಮರ್ಥಿಸುತ್ತಾರೆ.

( ಕನ್ನಡ )
2013-02-28
ಈ ದೃಶ್ಯ ವಸ್ತುವಿನಲ್ಲಿ ಒಬ್ಬ ಹಿಂದೂ ಸಹೋದರ ತಾನು ಸತ್ಯದ ಮಾರ್ಗದ ಅನ್ವೇಷಣೆಗೆ ಹಾಗೂ ಇಸ್ಲಾಮಿನ ಕುರಿತು ಅಧ್ಯಯನ ನಡೆಸಲು ಕಾರಣವಾದ ಮತ್ತು ಇಸ್ಲಾಂ ಸ್ವೀಕಾರ ಮಾಡಿದ ಕಥೆಯು ಒಳಗೊಂಡಿದೆ. ಮುಂದೆ ಅವರು ಇಸ್ಲಾಮೀ ಪ್ರಬೋಧಕನಾಗಿ ಬಿಟ್ಟರು.

( ಕನ್ನಡ )
2013-02-26
ಮಾನವನ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶಕ ಗ್ರಂಥವಾದ ಆದರಣೀಯ ಕುರ್'ಆನ್ ನ ಶ್ರೇಷ್ಠತೆಗಳು ಹಾಗೂ ಅದರ ಅಧ್ಯಯನ ಮತ್ತು ಹೃದಯಪಾಠ ಮಾಡಬೇಕಾದ ಅನಿವಾರ್ಯತೆಯನ್ನು ಈ ಕಿರು ಲೇಖನವು ವಿವರಿಸುತ್ತದೆ.

( ಕನ್ನಡ )
2013-02-26
ಅಲ್ಲಾಹುವಿನ ಅನುಗ್ರಹವಾದ ನಾಲಗೆಯನ್ನು ಮಾನವನು ತನ್ನ ನಾಶಕ್ಕೆ ಬಳಸದೆ ಅದನ್ನು ಅವನ ಸುರಕ್ಷಿತತೆಗೆ ಹೇಗೆ ಬಳಸಬೇಕು ಎಂಬುದನ್ನು ವಿವರಿಸುವ ಲಘು ಕೃತಿ. ಸುಳ್ಳು, ಚಾಡಿ, ಪರನಿಂದೆ ಮುಂತಾದ ದುರ್ಗುಣಗಳಿಂದ ಸತ್ಯವಿಶ್ವಾಸಿಗಳು ದೂರ ನಿಲ್ಲಬೇಕಾದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ.

( ಕನ್ನಡ )
2013-02-26
ಈ ಲೇಖನವು ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆಯ ಉಗಮ ಹಾಗೂ ಪ್ರಸ್ತುತ ಆಚರಣೆಯ ಇಸ್ಲಾಮೀ ವಿಧಿಯನ್ನು ತಿಳಿಸುತ್ತದೆ. ಜೊತೆಗೆ ಈ ನವೀನ ಸಂಪ್ರದಾಯದ ಕುರಿತು ವಿದ್ವಾಂಸರ ಅಭಿಪ್ರಾಯಗಳನ್ನು ನೀಡಲಾಗಿದೆ.

( ಕನ್ನಡ )
2013-02-16
ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ. ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ. ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ ಅರ್ಥದ ವಿವರಣೆ.

( ಕನ್ನಡ )
2013-02-16
ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಅತ್ಯಂತ ಸಮರ್ಪಕ ರಚನೆಯಾಗಿದೆ.

( ಕನ್ನಡ )
2013-02-16
ನಿಸ್ಸಂಶಯವಾಗಿಯೂ ಜೀವನದಲ್ಲಿ ಸೌಭಾಗ್ಯವನ್ನು ಅಥವಾ ಜೀವನ ಮಾಧುರ್ಯವನ್ನು ಅರಸುವುದು ಮಾನವನು ಬಯಸುವಂಥಹ ಜೀವನ ಲಕ್ಷ್ಯವಾಗಿದೆ. ಅವನು ತನ್ನ ದೈನಂದಿನ ಚಟುವಟಿಕೆಗಳ ಮೂಲಕ ಜೀವನ ಮಾಧುರ್ಯ, ಶಾಂತತೆ ಹಾಗೂ ನೆಮ್ಮದಿಯನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ವಸ್ತುತ ಜೀವನ ಸೌಭಾಗ್ಯ ದ ಕುರಿತಾದ ಜನರ ನಿಲುವುಗಳು ಒಂದೇ ತೆರನಾದವುಗಳಲ್ಲ. ಹೆಚ್ಚಿನ ಜನರು ಅದನ್ನು ಪಡೆಯುವುದರಲ್ಲಿ ಅವುಗಳ ಮಾರ್ಗಗಳಿಗೆ ತಲುಪುವುದರಲ್ಲಿ ಎಡವುತ್ತಾರೆ ಹಾಗೂ ಅವುಗಳ ಬಗ್ಗೆ ಅಜ್ಞಾನಿಗಳಾಗಿರುತ್ತಾರೆ. ನಿಜವಾಗಿ ಹೇಳುವುದಾದರೆ ಅವುಗಳನ್ನು ಪಡೆಯಲು ಹಾಗೂ ಸಾಕ್ಷಾತ್ಕಾರ ಮಾಡಿಕೊಳ್ಳಲು ಇರುವ ಮಾರ್ಗಗಳೆಂದರೆ ಅಲ್ಲಾಹುವಿನ ಮೇಲಿನ ವಿಶ್ವಾಸ ಹಾಗೂ ಸತ್ಕರ್ಮಗಳಾಗಿವೆ. ಈ ಕಿರು ಪುಸ್ತಕದಲ್ಲಿ ಲೇಖಕರು ಜೀವನ ಮಾಧುರ್ಯದೆಡೆಗೆ ಇರುವ ಪ್ರಮುಖ ಮಾರ್ಗಗಳನ್ನು ಪ್ರಸ್ತಾಪಿಸುತ್ತಾರೆ.

( ಕನ್ನಡ )
2013-02-16
ಈ ಪುಸ್ತಕವು ಇಸ್ಲಾಮಿನ ಕುರಿತಾದ ಕೆಲವು ತಪ್ಪುಕಲ್ಪನೆಗಳನ್ನು ವಿವರಿಸುತ್ತದೆ . ಒಂದು ಜ್ಞಾನಪುರ್ಣ ರೀತಿಯಲ್ಲಿ ಅವುಗಳನ್ನು ಖುರ್'ಆನ್ ಹಾಗೂ ಸುನ್ನತ್ ನ ಆಧಾರದಲ್ಲಿ ಹೋಗಲಾಡಿಸುವ ಪ್ರಯತ್ನವನ್ನು ಮಾಡುತ್ತದೆ.



